ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಬಸವ ಸಾಂಸ್ಕೃತಿಕ ಉತ್ಸವದ ಕಾರ್ಯಕ್ರಮದ ನಿಮಿತ್ಯವಾಗಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಬಸವ ವಚನಗಳ ಸಂವಾದ ಕಾರ್ಯಕ್ರಮವನ್ನು ಸೋಮವಾರ ಸಾಯಂಕಾಲ 6ಗಂಟೆ ಸುಮಾರಿಗೆ ನಿಜಗುಣಂದ ಶ್ರೀಗಳು ಉದ್ಘಾಟಿಸಿದರು. ಜಗಜ್ಯೋತಿ ಬಸವಣ್ಣನವರ ವಚನಗಳ ಮೇಲೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿ, ವಚನ ಸಾಹಿತ್ಯದ ಪ್ರಶ್ನೋತ್ತರ ನಡೆಸಿದರು. ಈ ಸಂದರ್ಭದಲ್ಲಿ ಮಠಾಧೀಶರು ವಿದ್ಯಾರ್ಥಿಗಳು ಹಾಗೂ ಬಸವ ಅಭಿಮಾನಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.