ರಾಯಚೂರು ನಗರದ ಸುತ್ತಮುತ್ತಲ ಗ್ರಾಮಗಳಲ್ಲಿ ರೈತರು ಬೆಳೆದಿರುವ ಹತ್ತಿ ಬೆಳೆಗೆ ರೋಗದ ಕಾಟ ಹೆಚ್ಚಾಗಿದ್ದು ಇದರಿಂದ ರೈತರು ಕಂಗಲಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಜಿಟಿಜಿಟಿ ಮಳೆಯಿಂದಾಗಿ ಹತ್ತಿ ಬೆಳೆಗೆ ಕೀಟಬಾದೆ ಹೆಚ್ಚಾಗಿ ಅನೇಕ ದಿನಗಳ ಕಾಲ ಬಿಸಿಲು ಬೀಳದೆ ತಂಪಾದ ವಾತಾವರಣ ಇದ್ದಿದ್ರಿಂದ ತೇವಾಂಶ ಹೆಚ್ಚಾಗಿ ಹತ್ತಿ ಬೆಳೆಯಲ್ಲಿ ಸೈನಿಕ ಹುಳುಗಳು ಎಂದೆ ಹುಳುಗಳ ಕಾಟ ಹೆಚ್ಚಾಗಿದ್ದರಿಂದ ಬೆಳೆ ಒಣಗಲಾರಂಭಿಸಿದೆ. ಕೃಷಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಸಂರಕ್ಷಣೆ ಕುರಿತು ಮಾರ್ಗದರ್ಶನ ನೀಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.