Download Now Banner

This browser does not support the video element.

ರಾಯಚೂರು: ಹುಣಸಿಹಾಳಹುಡಾ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಕಳಪೆಮಟ್ಟದ ಜೋಳ ವಿತರಣೆ; ಸಾರ್ವಜನಿಕರ ಆಕ್ರೋಶ

Raichur, Raichur | Aug 29, 2025
ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಉಚುತವಾಗಿ ನೀಡಲ್ಪಡುವ ಅಕ್ಕಿ ಜೋಳದ ಪೈಕಿ ಈ ಬಾರಿ ಕಳಪೆಮಟ್ಟದ ಜೋಳ ವಿತರಿಸಲಾಗುತ್ತಿದೆ. ರಾಯಚೂರು ತಾಲೂಕಿನ ಹುಣಸಿಹಾಳಹುಡಾ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಶುಕ್ರವಾರ ಗ್ರಾಹಕರಿಗೆ ಕಳಪೆಮಟ್ಟದ ಹಾಳಾದ ಜೋಳ ವಿತರಣೆ ಮಾಡಲಾಗಿದೆ. ಪ್ರಶ್ನೆ‌ ಮಾಡಿದ ಜನರಿಗೆ ನಾವೇನು ಮಾಡೋಣ, ಜೋಳ ಈ ಬಾರಿ ಹೀಗೆ ಬಂದಿವೆ ಹಾಕಿಸಿಕೊಳ್ಳಿ ಎಂದು ಉತ್ತರಿಸಿದ್ದಾರೆ. ಜೋಳ ಕಪ್ಪಾಗಿದ್ದು, ತಿನ್ನಲು ಯೀಗ್ಯವಿಲ್ಲ ಎಂದು ಜನರು ದನಕರುಗಳಿಗೆ ಇಡುತ್ತಿದ್ದಾರೆ. ಮತ್ತೆ ಕೆಲವರು ಕಳಪೆಮಟ್ಟದ ಜೋಳ ಹಾಕಿಸಿಕೊಳ್ಳುವುದೇ ಬೇಡ ಎಂದು ವಾಪಸ್ಸು ತೆರಳಿದ ಘಟನೆ ನಡೆದಿದೆ.
Read More News
T & CPrivacy PolicyContact Us