ಮದ್ದೂರಿನಲ್ಲಿ ಕಲ್ಲು ತೂರಾಟ ವಿಚಾರ ಸೋಮವಾರ ಮಧ್ಯಾಹ್ನ 2:45 ರ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ ಲಾಡ್ ಅವರು, ಈ ತರಹ ವಿಷಯ ಬಂದಾಗ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ, ಬಿಜೆಪಿ - ಜೆಡಿಎಸ್ ನವರು ಇಂತಹ ಸಂದರ್ಭಗಳಲ್ಲಿ ಮೈಲೇಜ್ ತೆಗೆದುಕೊಳ್ಳಲು ಹೋಗ್ತಾರೆ. ಎಲ್ಲಾ ಸರ್ಕಾರದಲ್ಲಿಯೂ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ಕಿಡಿಗೇಡಿಗಳಿಗೂ ಕುಮ್ಮಕ್ಕು ಕೊಡುವ ಕೆಲಸ ಆಗುತ್ತಿದೆ. ಅಂತಹವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.