ಚಿತ್ರದುರ್ಗದಲ್ಲಿ ಪದವಿ ವಿಧ್ಯಾರ್ಥಿನಿ ವರ್ಷಿತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ಮುಕ್ತಾಯ ವಾಗಿದ್ದು, ಗುರುವಾರ ಬೆಳಿಗ್ಗೆ 10 ಗಂಟೆಗೆ ಹಿರಿಯೂರು ತಾಲ್ಲೂಕಿನ ಕೋವೇರಹಟ್ಟಿ ಗ್ರಾಮದಲ್ಲಿ ಕೊಲೆಯಾದ ವರ್ಷಿತಾ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಗ್ರಾಮದ ಜ್ಯೋತಿ ತಿಪ್ಪೇಸ್ವಾಮಿ ಮಗಳಾಗಿದ್ದ ವರ್ಷಿತಾ ಮೃತದೇಹನ್ನ ಸಂಪ್ರದಾಯದಂತೆ ತಿಪ್ಪೇಸ್ವಾಮಿಗೆ ಸೇರಿದ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದೇ ವೇಳೆ ಮಾತ್ನಾಡಿದ ಆಕೆಯ ತಾಯಿ ಜ್ಯೋತಿ ಮಗಳ ಸಾವಿಗೆ ನ್ಯಾಯ ಸಿಗಲಿ ಎಂದು ಆಗ್ರಹಿಸಿದ್ದಾರೆ