ಗಂಜಾಮ್ ಗ್ರಾಮದ ರಸ್ತೆ ಗುಂಡಿಮಯ: ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಿದ್ದಯ್ಯ ಕಿಡಿ ಪಟ್ಟಣದ ಗಂಜಾಮ್ ಗ್ರಾಮದ ಗೋಸಾಯ್ ಘಾಟ್ ರಸ್ತೆ ಸಂಪೂರ್ಣ ಹದಗೆಟ್ಟು, ಗುಂಡಿಗಳಿಂದ ಕೂಡಿದೆ. ಇದರಿಂದ ವಾಹನ ಹಾಗೂ ಜನರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಹಲವರು ಬಿದ್ದು ಗಾಯಗೊಂಡಿದ್ದಾರೆ. ರಸ್ತೆ ಬದಿಯಲ್ಲಿ ಬೆಳೆದಿರುವ ಬೇಲಿಗಳಿಂದ ಸೊಳ್ಳೆ, ಹಾವು, ಚೇಳುಗಳ ಹಾವಳಿಯೂ ಹೆಚ್ಚಿದೆ. ಈ ರಸ್ತೆ ದುರಸ್ತಿಗೆ ಪುರಸಭೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಗ್ಯ ರಕ್ಷಾ ಸಮಿತಿ ಸದಸ್ಯ ವಿ. ಸಿದ್ದಯ್ಯ ಆರೋಪಿಸಿದ್ದಾರೆ.