ಆಗಸ್ಟ್ 24ರ ಬೆಳಗ್ಗೆ 10 ಗಂಟೆಗೆ ತಲಘಟ್ಟಪುರ ಪೊಲೀಸರು ವಿಚಿತ್ರ ಕಳ್ಳ ನನ್ನ ಬಂಧಿಸಿದ್ದಾರೆ. ನಾಗರಾಜ್ ಎಂಬುವ ಕದೀಮ ಪಿಜಿಗಳಲ್ಲಿ ನೆಲೆಸುತ್ತಿದ್ದು ತನ್ನ ರೂಮ್ ಮೇಟ್ಸ್ ಮೊಬೈಲ್ ಕಳ್ಳತನ ಮಾಡುತ್ತಿದ್ದ. ಮೊಬೈಲ್ ನ ಯುಪಿಐ ಪಾಸ್ವರ್ಡ್ ತಿಳಿದುಕೊಳ್ಳಲು ಎರಡು ಮೂರು ದಿನ ಪಿಜಿಗಳಲ್ಲಿ ಉಳಿದುಕೊಳ್ಳುತ್ತಿದ್ದ. ಪಾಸ್ವರ್ಡ್ ತಿಳಿದುಕೊಂಡು ಮೊಬೈಲ್ ಎಗರಿಸಿ ಪರಾರಿಯಾಗಿದ್ದ. ಹೀಗೆ ಹಲವಾರು ಮೊಬೈಲ್ಗಳನ್ನ ಕದ್ದು ಯುಪಿಐ ಮೂಲಕ ದುಡ್ಡು ಕದ್ದು ಆ ಮೊಬೈಲ್‌ಗಳನ್ನ ಲ್ಯಾಪ್ಟಾಪ್ ಗಳನ್ನ ಬೇರೆಯವರಿಗೆ ಗಿಫ್ಟ್ ಕೊಡುತ್ತಿದ್ದ.