ವಾಹನಗಳ ಪಾರ್ಕಿಂಗ್ ಸಮಸ್ಯೆ ಬಗೆಹರಿಸಬೇಕು ಎಂದು ವಿಜಯಪುರ ನಗರದಲ್ಲಿ ವ್ಯಾಪಾರಸ್ಥರ ಸಂಘದಿಂದ ಗುರುವಾರ ಸಾಯಂಕಾಲ 5ಗಂಟೆ ಸುಮಾರಿಗೆ ಪ್ರತಿಭಟಿಸಿದರು. ಪೊಲೀಸ್ ಇಲಾಖೆಯಿಂದ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡದ ಹಿನ್ನೆಲೆ, ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಇನ್ನು 20 ರೂಪಾಯಿ ವ್ಯಾಪಾರ ಮಾಡಲು ಬಂದಂತಹ ರೈತರುಗಳು 500 ರೂಪಾಯಿ ದಂಡ ಕಟ್ಟುವಂತಹ ಪ್ರಶಸ್ತಿ ಇಲ್ಲಿ ನಿರ್ಮಾಣವಾಗಿದೆ ವಾಹನ ಸವರರಿಗೆ ಪೊಲೀಸ್ ಇಲಾಖೆಯಿಂದ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗುತ್ತದೆ ಕೂಡಲೇ ಪಾರ್ಕಿಂಗ್ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.