ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಗಂಗೂರ ಗ್ರಾಮದ ೫೭ ವರ್ಷದ ರೈತ ಗುರುಸಿದಯ್ಯ ಹಿರೇಮಠ ತನ್ನ ಜಮೀನದಲ್ಲಿ ಬೆಳೆದಿರುವ ಬೆಳೆ ಕೈ ಕೊಟ್ಟಿದ್ದರಿಂದ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಎಂದು ಜೀವನದಲ್ಲಿ ಮಾನಸಿಕೊಂಡು ತಮ್ಮ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪಿಕೆಪಿಎಸ್‌ದಲ್ಲಿ ೫೦ ಸಾವಿರ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ದಲ್ಲಿ ೩ ಲಕ್ಷ ರೂ ಸಾಲವನ್ನು ಮಾಡಲಾಗಿದ್ದ ಎನ್ನಲಾಗಿದೆ. ಈ ಕುರಿತು ಹುನಗುಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆ.೦೧ ಮಧ್ಯಾಹ್ನ ೨ ಗಂಟೆಗೆ ಪೋಲಿಸ್ ಮಾಹಿತಿಯಿಂದ ತಿಳಿದು ಬಂದಿದೆ.