ಹುಬ್ಬಳ್ಳಿಯಲ್ಲಿ 3 ಕಾರು, 1 ಆಟೋ ಹಾಗೂ ಖಾಸಗಿ ಬಸ್ ನಡುವೆ ಸರಣಿ ಅಪಘಾತವಾಗಿರುವ ಘಟನೆ ನಡೆದಿದೆ. ನಗರದ ರೈಲ್ವೆ ಸ್ಟೇಷನ್ ರೋಡ್ ಹತ್ತಿರ ಸರಣಿ ಅಪಘಾತವಾಗಿದ್ದು. ಸರಣಿ ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸರಣಿ ಅಪಘಾತದಿಂದ ಕೆಲ ಹೊತ್ತು ರೋಡ್ ಬ್ಲಾಕ್ ಆಗಿದ್ದರಿಂದ ಟ್ರಾಫಿಕ್ ಉಂಟಾಗಿ ವಾಹನ ಸವಾರರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ. ಟ್ರಾಫಿಕ್ ಕ್ಲಿಯರ್ ಮಾಡುವ ಮೂಲಕ ವಾಹನ ಸವಾರರ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.