ಹೊಳೆ ದಾಟುವಾಗ ಉಕ್ಕಡ ಮಗುಚಿ ಯುವಕ ನೀರುಪಾಲಾಗಿದ್ದಾನೆ. ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಹೊಸನಗರ ತಾಲೂಕು ಬಂಟೋಡಿಯಲ್ಲಿ ಶನಿವಾರ ಸಂಜೆ 5 ಗಂಟೆಗೆ ಘಟನೆ ನಡೆದಿದೆ.ಹೊಸನಗರ ತಾಲೂಕಿನ ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟಿನಹೊಳೆ ಗ್ರಾಮದ ಮೂವರು ಯುವಕರು ತೆರಳುತ್ತಿದ್ದ ಉಕ್ಕಡ ಮಗುಚಿದೆ. ಪೂರ್ಣೇಶ (22) ಎಂಬ ಯುವಕ ನೀರು ಪಾಲಾಗಿದ್ದಾರೆ. ಜೊತೆಯಲ್ಲಿದ್ದ ಶರತ್ ಮತ್ತು ರಂಜನ್ ಎಂಬ ಯುವಕರು ಅದೃಷ್ಟವಶಾತ್ ಬದುಕುಳಿದಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ದೌಡಾಯಿಸಿದ್ದು, ನೀರುಪಾಲಾದ ಯುವಕನಿಗಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.