ಅಪ್ರಾಪ್ತೆ ಅಪಹರಣ ಮಹಿಳಾ ಠಾಣೆ ಪೊಲೀಸರು ನಿರ್ಲಕ್ಷ್ಯ ಧೋರಣೆ ತಳೆದಿದ್ದು, 15 ದಿನವಾದರೂ ಈ ವರೆಗೆ ಬಾಲಕಿ ಪತ್ತೆಯಾಗಿಲ್ಲ. ಕೂಡಲೇ ಬಾಲಕಿಯನ್ನು ಪತ್ತೆ ಮಾಡಿಕೊಡಬೇಕು’ ಎಂದು ಆಗ್ರಹಿಸಿಸೋಮವಾರ ಮಧ್ಯಾಹ್ನ 3ಗಂಟೆಗೆ ಜಿಲ್ಲಾ ಕುರುಬರ ಸಂಘದ ಮುಖಂಡರು ಮತ್ತು ಪೋಷಕರು ಆಗ್ರಹಿಸಿದ್ದಾರೆ. ನಗರದ ಬಿಸಿಲಹಳ್ಳಿ ಗ್ರಾಮದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಆ. 28ರಂದು ಎಫ್ಐಆರ್ ದಾಖಲಾಗಿದೆ. ಹರೀಶ್ ಎಂಬಾತ ಬಾಲಕಿಯನ್ನು ಅಪಹರಣ ಮಾಡಿರುವ ಬಗ್ಗೆ ಪೋಷಕರು ಶಂಕೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಬಾಲಕಿ ಈ ವರೆಗೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮಹಿಳಾ ಠಾಣೆ ಎದುರು ಜಮಾಯಿಸಿದ ಪೋಷಕರು ಮತ್ತು ಕುರುಬ ಸಂಘದ ಮುಖಂಡರು ಬಾಲಕಿಯ ಶೀಘ್ರ ಪತ್ತೆಗೆ ಒತ್ತಾಯಿಸಿದರು.