ಶಿವಮೊಗ್ಗ ನಗರದ ವಿನೋಬನಗರದಲ್ಲಿ ಶನಿವಾರ ಬೆಳಗಿನ ಜಾವ 5:30 ಕ್ಕೆ ಬೈಕ್ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಸ್ ನಿಲ್ದಾಣ ಕಡೆಯಿಂದ ಬಂದ ಬೈಕ್ ಮತ್ತು ಚೌಕಿ ಕಡೆಯಿಂದ ಬಂದ ಆಟೋ ನಡುವೆ ಡಿಕ್ಕಿ ಯಾಗಿದೆ. ಅಪಘಾತದಲ್ಲಿ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಆಟೋ ಚಾಲಕ ಸ್ಥಳದಲ್ಲಿ ಮೃತನಾಗಿದ್ದಾನೆ. ಸಾವನ್ನಪ್ಪಿರುವ ಆಟೋ ಚಾಲಕನನ್ನು ಜಫ್ರುಲ್ಲಾ ಯಾನೆ ವಾಲು ಎಂದು ಗುರುತಿಸಲಾಗಿದ್ದು ಈತ ನಗರದ ನ್ಯೂ ಮಂಡ್ಲಿ ನಿವಾಸಿಯಾಗಿದ್ದಾನೆ. ಆಟೋ ಮತ್ತು ಬೈಕ್ ಎರಡನ್ನು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಸಾಗಿಸಲಾಗಿದೆ.