ಚನ್ನಪಟ್ಟಣ -- ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಪ್ಯಾನ್ ಹಾಗೂ ಕಿಟಕಿಗಳ ಕಳ್ಳತನಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಶನಿವಾರ ದಲಿತ ಮುಖಂಡರು ಆರೋಪಿಸಿದರು. ಈ ಸಂಭಂದ ಅಂಬೇಡ್ಕರ್ ಭವನದ ಮುಂದೆ ಪ್ರತಿಭಟನೆ ನಡೆಸಿದ ದಲಿತ ಮುಖಂಡರು, 2006ರಲ್ಲಿ ಭೂಮಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು ಇಲ್ಲಿಯವರೆಗೂ ಕಾಮಗಾರಿ ಪೂರ್ಣವಾಗದೆ ಅದು ಪುಂಡು ಪೋಕರಿಗಳ ತಾಣವಾಗುವ ಜೊತೆಗೆ ಕಟ್ಟಡದಲ್ಲಿ ಕಳ್ಳತನ ಹೆಚ್ಚಾಗಿದೆ. ಇಲಾಖೆಯವರು ಉದಾಶೀನತೆಯಿಂದ ಇಲ್ಲಿಯವರೆಗೂ ಕಳ್ಳತನದ ತಡೆಗಟ್ಟುವ ಕಡೆ ಗಮನ ಹರಿಸಿಲ್ಲ ಹಾಗೂ ಇದಕ್ಕೆ ಯಾವುದೇ ರಕ್ಷಣೆಯಿಲ್ಲದೆ ಕಿಟಕಿ. ಪ್ಯಾನ್ ಗಳು