ಯಲ್ಲಾಪುರ :ಅರಬೈಲ್ ಘಟ್ಟದಲ್ಲಿ ತಡೆ ಗೋಡೆಗೆ ಕಾರು ಡಿಕ್ಕಿಯಾದ ರಭಸಕ್ಕೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಸೋಮವಾರ ತಡ ರಾತ್ರಿ ಸಂಭವಿಸಿದೆ.ಕಾರಿನಲ್ಲಿದ್ದ ಉದ್ಯಮ ನಗರದ ರೂಪೇಶ್ ನಾಯ್ಕ,ಅಕ್ಷಯ ನಾಯ್ಕ ಅದೃಷ್ಟ ವಶಾತ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.ಸುದ್ದಿ ತಿಳಿದ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.ತಡ ರಾತ್ರಿ ಯಾಗಿದ್ದ ರಿಂದ ಸಂಚಾರ ವಿರಳ ವಾಗಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.