ವಿರಾಜಪೇಟೆಯ ಕುಂಜಲಗೇರಿ ನಿವಾಸಿಗಳಿಗೆ, ಗುಣಮಟ್ಟದ ವಿದ್ಯುತ್ ಪೂರೈಸಲು ಅಳವಡಿಸಿದ ನೂತನ ವಿದ್ಯುತ್ ಮಾರ್ಗದ ಉದ್ಘಾಟನೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ನೆರವೇರಿಸಿದರು. ಈ ಹಿಂದೆ ಕುಂಜಲಗೇರಿ ನಿವಾಸಿಗಳಿಗೆ/ಗ್ರಾಹಕರಿಗೆ ಪಾರಣೆ-ಬೊಳ್ಳುಮಾಡು 11 ಕೆವಿ HT ಫೀಡರಿನ ಮೂಲಕ ವಿದ್ಯುತ್ ಸರಬರಾಜು ಮಾಡಲಾಗಿತ್ತು. ಆದರೆ ಮಳೆಗಾಲದಲ್ಲಿ ಮತ್ತು ಪಾರಣೆಯಲ್ಲಿ-ಮೂರ್ನಾಡು 33/11 KV ಉಪಕೇಂದ್ರದಲ್ಲಿ ಅಡಚಣೆಯಾದಾಗ, ಕುಂಜಲಗೇರಿ ಗ್ರಾಹಕರಿಗೆ ಹಲವು ದಿನಗಳ ಕಾಲ ವಿದ್ಯುತ್ ಸಂಪರ್ಕ ಇರುತ್ತಿರಲಿಲ್ಲ. ಇದನ್ನು ಮನಗಂಡ ಶಾಸಕರು, ವಿರಾಜಪೇಟೆ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು, ಬೊಳ್ಳುಮಾಡು ಸೇತುವೆಯಿಂದ ಕುಂಜಲಗೇರಿ ಮೊದ