ನಟ ಉಪೇಂದ್ರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಅನ್ನೋ ಮಾಹಿತಿ ಲಭ್ಯ ಆಗಿದೆ. ಮೇ 4ರಂದು ಓವರ್ ಆಸಿಡಿಟಿ ಸಮಸ್ಯೆ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ನಟ ಉಪೇಂದ್ರ ಮೇ 5ರ ಮಧ್ಯಾಹ್ನ 3ಗಂಟೆ ವೇಳೆಗೆ ಡಿಶ್ಚಾರ್ಜ್ ಆಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲ, ಸದ್ಯ ಉಪೇಂದ್ರ ಆರೋಗ್ಯವಾಗಿದ್ದಾರೆ. ಗ್ಯಾಸ್ಟ್ರಿಕ್ ಸಮಸ್ಯೆ ಹಿನ್ನೆಲೆ ಚಿಕಿತ್ಸೆ ಪಡೆದಿದ್ದಾರೆ ಅಂತಾ ನಟನ ಆಪ್ತ ಮೂಲಗಳಿಂದ ಮಾಹಿತಿ ಹೊರ ಬಿದ್ದಿದೆ.