ಅಂಜುಮಲಾ ನಾಯಕರಿಗೆ ರಾಷ್ಟ್ರಪತಿ ಪದಕ ಪ್ರದಾನ ಅಂಕೋಲಾ : ತಾಲೂಕಿನ ಶಿರಗುಂಜಿ ಮೂಲದ ಅಂಜುಮಲಾ ನಾಯಕರಿಗೆ ರಾಷ್ಟ್ರಪತಿಗಳ ಪೊಲೀಸ ಶ್ಲಾಘನೀಯ ಸೇವಾ ಪದಕ ಪ್ರದಾನ ಬೆಂಗಳೂರು ಸಿ. ಐ.ಡಿ ವಿಭಾಗದಲ್ಲಿ ಏ. ಸಿ. ಪಿ ಯಾಗಿ ಕಾರ್ಯನಿರ್ವಹಿಸುತ್ತಿರುವ ಅಂಜುಮಲಾ ತಿಮ್ಮಣ್ಣ ನಾಯಕ ಇವರಿಗೆ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಪದಕ ಘೋಷಣೆ ಆಗಿತ್ತು. ಬೆಂಗಳೂರಿನ ರಾಜಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲರಾದ .ಥಾವರ್ ಚಂದ ಗೆಹ್ಲೋಟ್ ಇವರು ರಾಷ್ಟ್ರಪತಿಗಳ ಪೊಲೀಸ ಶ್ಲಾಘನೀಯ ಸೇವಾ ಪದಕ ವನ್ನು ಅಂಜುಮಲಾ ನಾಯಕರಿಗೆ ನೀಡಿ ಗೌರವಿಸಿದರು.