Download Now Banner

This browser does not support the video element.

ಗುಬ್ಬಿ: ನಿಟ್ಟೂರಿನಲ್ಲಿ ಅಯೋಧ್ಯೆ ಗಣಪನ ಸ್ಥಾಪನೆ, ವಿಶೇಷ ಹೋಮ ಹವನ

Gubbi, Tumakuru | Aug 27, 2025
ಗುಬ್ಬಿ ತಾಲೂಕಿನ ಹೃದಯ ಭಾಗವಾದ ನಿಟ್ಟೂರಿನಲ್ಲಿ ಈ ಬಾರಿ ಅಯೋಧ್ಯ ಗಣಪನ ಪ್ರತಿಷ್ಠಾಪನೆಯ ಮೂಲಕ ಗಣೇಶೋತ್ಸವ ಭಕ್ತಿಭಾವದಿಂದ ಆರಂಭವಾಗಿದೆ. ಕಳೆದ ಎರಡು ದಶಕಗಳಿಂದ ಶ್ರೀ ಸತ್ಯ ಗಣಪತಿ ಸೇವಾ ಸಂಘದ ವತಿಯಿಂದ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದ್ದು, ಈ ಬಾರಿ ವಿಶೇಷವಾಗಿ ಅಯೋಧ್ಯ ಗಣಪನ ರೂಪದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಬುಧವಾರ ಮಧ್ಯಾಹ್ನ 3 ಗಂಟೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೋಮ-ಹವನ ಸೇರಿದಂತೆ ವಿಶೇಷ ಪೂಜೆಗಳು ನೆರವೇರಿದ್ದು, ಭಕ್ತರಲ್ಲಿ ಹರ್ಷೋದ್ಗಾರ ಮೂಡಿಸಿದೆ. ಪ್ರತಿನಿತ್ಯ ಸಂಜೆಯ ವೇಳೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದು ಸಮಿತಿಯವರು ತಿಳಿಸಿದ್ದಾರೆ...
Read More News
T & CPrivacy PolicyContact Us