ಮಲೆನಾಡಲ್ಲಿ ಸುರಿದ ಮಳೆಯಿಂದ ಸೊರಬ ತಾಲೂಕಿನ ಕಮರೂರು ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ 5 ಗಂಟೆಗೆ ಮನೆಯೊಂದು ಕುಸಿದು ಬಿದ್ದ ಘಟನೆ ನಡೆದಿದೆ. ರಂಗಮ್ಮ ಎಂಬುವರಿಗೆ ಸೇರಿದ ಮನೆ ಕುಸಿದಿದೆ. ಮನೆಯ ಗೋಡೆ ಕುಸಿದು ಬೀಳುತ್ತಿದ್ದಂತೆ, ರಂಗಮ್ಮ ಅವರು ಮನೆಯಿಂದ ಹೊರ ಓಡಿ ಬಂದಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಕೆಂಪು ಹೆಂಚಿನ ಮೇಲ್ಛಾವಣಿಯ ಮನೆಯಾಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ