ಸೋಮವಾರಪೇಟೆ ತಾಲ್ಲೂಕಿನ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಚಾಲನೆ ನೀಡಿದರು. ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು. ರಸ್ತೆ ಕಾಮಗಾರಿಯ ಸಂದರ್ಭ ಕಳಪೆ ಕಾಮಗಾರಿ ನಡೆಯದಂತೆ ಎಚ್ಚರ ವಹಿಸಬೇಕು. ಕಾಮಗಾರಿಯನ್ನು ಗ್ರಾಮಸ್ಥರು ಖುದ್ದು ಪರಿಶೀಲಿಸಿ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಹೀಗೆ ಮಾಡುವುದರಿಂದ ಅಭಿವೃದ್ಧಿ ಹೊಂದಿದ ರಸ್ತೆಗಳು ಸುದೀರ್ಘ ಕಾಲ ಹದಗೆಡದೆ ಉಳಿದುಕೊಳ್ಳಲಿವೆ ಎಂದು ತಿಳಿಸಿದರು. *ವಿವಿಧೆಡೆ ಕಾಮಗಾರಿ* ರೂ.1 ಕೋಟಿ ವೆಚ್ಚದಲ್ಲಿ ಐಗೂರು-ಕಿರಗಂದೂರು-ಕೂಡೆಗದ್ದೆ ರಸ್ತೆ ಕಾಂಕ್ರಿಟೀಕರಣ, ರೂ.50 ಲಕ್ಷ ವೆಚ್ಚದಲ್ಲಿ ತ