ರಾತ್ರಿ ಹೊತ್ತು ಅಟೋದಲ್ಲಿ ಪ್ರಯಾಣಿಕರ ಸುಲಿಗೆ ಮಾಡುತ್ತಿರುವ ಬಗ್ಗೆ ಪಬ್ಲಿಕ್ ಆಪ್ ನಲ್ಲಿ ಸುದ್ದಿ ಬಿತ್ತರಗೊಂಡ 24 ಗಂಟೆ ಒಳಗಾಗಿ ಪೊಲೀಸರು ಬಾಲಕ ಸೇರಿ ಐವರನ್ನು ಬಂಧಿಸಿ ಜೈಲಿಗೆ ಕಳೆಸಿದ್ದಾರೆ. ಸಿದ್ದಾರೂಡ ಆಲಗೂಡ 21, ಮಹೇಶ್ ಜಾನೆಕರ್ 18, ಜೈಪ್ರಕಾಶ್ ದೇವದುರ್ಗ 18, ಅಖಿಲೇಶ್ ನಾಟಿಕರ್ 19 ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆದು ಕೃತಕ್ಕೆ ಬಳಕೆ ಮಾಡಿದ ಒಂದು ಆಟೋ, ಚಾಕು, 1.80 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾಗಿ ಭಾನುವಾರ 3 ಗಂಟೆಗೆ ಪೊಲೀಸರು ತಿಳಿಸಿದ್ದಾರೆ. ರಾತ್ರಿ ಹೊತ್ತು ಅಟೋ ಪ್ರಯಾಣಿಕರನ್ನು ಟಾರ್ಗೇಟ್ ಮಾಡುತ್ತಿದ್ದ ಆರೋಪಿಗಳು, ಮೂರು ದಿನಗಳ ಅಂತರದಲ್ಲಿ ಇಬ್ಬರನ್ನು ಅಟೋದಲ್ಲಿ ಸುಲಿಗೆ ಮಾಡಿದ್ದರು. ರಾತ್ರಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಂ