ತೀವ್ರ ಪೈಪೋಟಿ, ಒತ್ತಡ ,ಗೊಂದಲಗಳಲ್ಲಿ ದಸರಾ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸುವುದು ಮಾನಸಿಕ ಯಾತನೆಯಾಗುತ್ತದೆ ಎಂಬ ನೀಲುವಿನಿಂದ ಅಧ್ಯಕ್ಷ ಸ್ಥಾನದಿಂದ ಹೊರಗುಳಿಯುತ್ತಿದ್ದೇನೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಮಕೃಷ್ಣ ಸ್ಪಷ್ಟತೆ ನೀಡಿದ್ದಾರೆ. 47ನೇ ವರ್ಷದ ದಸರಾ ಆಚರಣೆಯ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಲು ಆಸಕ್ತಾರಾದ ಪ್ರಮೋದ್ ಗಣಪತಿಯವರು ದಸರಾ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.ಇದರಲ್ಲಿ ಯಾವುದೇ ಗೊಂದಲವಿಲ್ಲ.ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಗಣಪತಿ ಅವರು ಅಧ್ಯಕ್ಷರಾಗಲು ಬೆಂಬಲ ಸೂಚಿಸಿದ್ದಾರೆ ಎಂದು ರಾಮಕೃಷ್ಣ ಅವರು ಶುಕ್ರವಾರ ಮಹಿಳಾ ಸಮಾಜದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ