ಹಾಸನ : ಜಮೀನು ಒತ್ತುವರಿ ವಿಚಾರವಾಗಿ ಮಾತಿನ ಚಕಮಕಿನಿಯಿಂದ ಶುರುವಾದ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ನಾಲ್ಕು ಮಂದಿಯ ಮೇಲೆ ಹಲ್ಲೆ ನಡೆದಿರುವ ಘಟನೆ ಬೇಲೂರು ತಾಲ್ಲೂಕಿನ ಮಾದಿಹಳ್ಳಿ ಹೋಬಳಿಯ ಮಾದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಾದಿಹಳ್ಳಿ ಗ್ರಾಮದ ಕುಮಾರಿ, ರವಿ, ಸುಶೀಲಮ್ಮ, ಜೀವನ್ ಹಲ್ಲೆಗೊಳಗಾದ ವ್ಯಕ್ತಿಗಳು. ನಾಲ್ಕು ಜನ ಗಾಯಾಳುಗಳು ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದವರು ಮೋಹನ್ , ಶಿವಣ್ಣ, ಧರ್ಮ, ಸುಶ್ಮಿತಾ, ಕಮಲಿ,ವಿನಯ್ ಒಟ್ಟು ಆರು ಜನ ಸೇರಿ ಮಚ್ಚು ಮತ್ತು ರಾಡ್ ನಿಂದಾ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳುಗಳು ಆರೋಪ ಮಾಡಿದ್ದಾರೆ.