ಇಳಕಲ್ ತಾಲೂಕಾ ಅಧಿಕಾರಿಗಳು ಕಾಟಾಚಾರಕ್ಕೆ ಸಭೆಗೆ ಬರದೇ ಇಲ್ಲಿ ಕೇಳಬಹುದಾದ ಪ್ರಶ್ನೆಗಳಿಗೆ ಸಮರ್ಪಕವಾದ ಮಾಹಿತಿಯನ್ನು ನೀಡಲು ಸಕಲ ರೀತಿಯಿಂದ ಸಜ್ಜಾಗಿ ಸಭೆಗೆ ಬರಬೇಕು ಎಂದು ಬಾಗಲಕೋಟ ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ ಎಚ್ಚರಿಕೆಕೊಟ್ಟರು. ಬಾಗಲಕೋಟ ಜಿಲ್ಲೆಯ ಇಳಕಲ್‌ದ ನಗರಸಭೆ ಪಕ್ಕದ ಅಂಬೇಡ್ಕರ್ ಭವನದಲ್ಲಿ ಸೆ.೧೦ ಮಧ್ಯಾಹ್ನ ೧೨ ಗಂಟೆಗೆ ನಡೆದ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಇಲ್ಲಿ ಎಂಟು ಸಾರ್ವಜನಿಕರಿಂದ ಅರ್ಜಿಗಳು ಬಂದಿದ್ದು ಅವುಗಳನ್ನು ಸಂಬAಧಪಟ್ಟವರಿಗೆ ಕಳಿಸಿ ಇತ್ಯರ್ಥ ಮಾಡಲು ಆದೇಶ ಮಾಡಲಾಗಿದೆ ಲೋಕಾಯುಕ್ತರ ಕೆಲಸ ಎಲ್ಲಿ ಭೃಷ್ಟಾಚಾರ ನಡೆದಿದೆ , ಎಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಆದಾಯ ಸರಕಾರಿ ನೌಕರ ಗಳಿಸಿದ್ದಾನೋ ,