ಪಾವಗಡ ಪಟ್ಟಣದ ಎಸ್‌ಎಸ್‌ಕೆ ರಂಗಮಂದಿರದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಮಂಗಳವಾರ ಮಧ್ಯಾನ 2 ಗಂಟೆಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಶಾಸಕರಾದ ಎಚ್.ವಿ. ವೆಂಕಟೇಶ್ ಮಾತನಾಡಿ “ಶಿಕ್ಷಕರು ವಿದ್ಯಾರ್ಥಿಗಳ ಬದುಕಿಗೆ ಜೀವಮಾನಪೂರ್ತಿ ಬೆಳಕು ಚೆಲ್ಲುವ ದಾರಿ ದೀಪಗಳಾಗಬೇಕು” ಎಂದು ಹೇಳುವುದರ ಜೊತೆಗೆ ತಾಲ್ಲೂಕಿನಲ್ಲಿ 70 ಕೋಟಿ ರೂ ವೆಚ್ಚದಲ್ಲಿ ಕಾರ್ಮಿಕ ಶಾಲೆಗಳ ನಿರ್ಮಾಣ, 2000 ಮೆಗಾವಾಟ್ ಸೋಲಾರ್ ಘಟಕ ಉದ್ಘಾಟನೆ, 24 ಕೋಟಿ ರೂ ವೆಚ್ಚದಲ್ಲಿ ನಾಗಲಮಡಿಕೆ ದೇವಸ್ಥಾನ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು. ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಅವರು ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ