ಶಿರಸಿ : ಬನವಾಸಿ ರಸ್ತೆಯಲ್ಲಿ ಬೈಕ್ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಘಟನೆ ನಡೆದಿದೆ ಅದೃಷ್ಟ ವಶಾತ ಬೈಕ್ ಮೇಲಿದ್ದ ಸವಾರ ಎನ್ ಎ ಪಾಲೇಕರ್ ಅಪಾಯದಿಂದ ಪಾರಾಗಿದ್ದಾರೆ. ಬೃಹತ್ ಗಾತ್ರದ ಒಣಗಿದ ಮರ ಸಂಪೂರ್ಣವಾಗಿ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದರೂ ಮರದ ಟಿಸಿಲ ಒಳಗೆ ಸಿಲುಕಿದ್ದ ಸವಾರ ದೇವರ ಅನುಗೃಹದಿಂದಲೇ ಬದುಕಿ ಬಂದನೆಂದು ಹೇಳಬಹುದಾಗಿದೆ.ತಲೆಯ ಮೇಲೆ ಬೃಹತ್ ಗಾತ್ರದ ಮರದ ಕಾಂಡ ಬಿದ್ದರೂ ತಲೆಗೆ ಹೆಲ್ಮೆಟ್ ಇದ್ದಿದ್ದರಿಂದ ಅದೃಷ್ಟ ಅವರ ಬೆನ್ನಿಗೆದೆ ಎಂದೇ ಹೇಳ್ಬೇಕು. ಬೈಕ್ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.ಇಂದಿನ ಘಟನೆ ಹೆಲ್ಮೆಟ್ ಧರಿಸದೇ ಬೈಕ್ ಓಡಿಸುವ ಸವಾರರಿಗೆ ನಿಜವಾಗಿಯೂ ಒಂದು ಪಾಠವಾದಂತಾಗಿದೆ.ಘಟನೆ ತಿಳಿದು ತಕ್ಷಣಕ್ಕೆ ಬಂದ ಅರಣ್ಯ ಇಲಾಖೆಯವರು ಮರ ತೆರವುಗೊಳಿಸುವ ಕಾರ್ಯಕ್ಕೆ ಮುಂದಾದರು.