ಹಾಸನ: ಲೋಪದೋಷಗಳಿಂದ ಕೂಡಿರುವ ವಾಕ್ ಮಸೂದೆಯನ್ನು ರದ್ದುಗೊಳಿಸಿ ಮುಸಲ್ಮಾನರ ಹಕ್ಕು ಬಾಧ್ಯತೆಗಳನ್ನು ಕಾಪಾಡಬೇಕು ಎಂದು ಒತ್ತಾಯಿಸಿ ಮುಸ್ಲಿಂ ಮಹಿಳಾ ಘಟಕದಿಂದ ಡಿಸಿ ಕಚೇರಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ಮಹಿಳಾ ಘಟಕದ ಮುಖಂಡರಾದ ತಸ್ಮೀಯ ಮಾತನಾಡಿ, ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಮುಸಲ್ಮಾನ್ ಸಮುದಾಯದಕ್ಕೆ ಅನ್ಯಾಯವಾಗಿದೆ, ಸಂವಿಧಾನದಲ್ಲಿ ನೀಡಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ತಿದ್ದುಪಡಿ ವೇಳೆ ಧಕ್ಕೆ ತಂದಂತೆ ಆಗಿದೆ. ಧಾರ್ಮಿಕ ಸ್ವಾತಂತ್ರ್ಯ ದ ಅಡಿಯಲ್ಲಿ ಯಾವುದೇ ವ್ಯಕ್ತಿ ತನ್ನ ಧಾರ್ಮಿಕ ನೀತಿ ನಿಯಮಗಳನ್ನು ಅನುಕರಣೆ ಮಾಡಲು ಸ್ವತಂತ್ರ ನೀಡಲಾಗಿದೆ ಆದರೆ ತಿದ್ದುಪಡಿ ವೇಳೆ ಹಕ್ಕನ್ನು ಕಸಿದು ಕೊಳ್ಳಲಾಗಿದೆ ಎಂದರು.