ಹುಬ್ಬಳ್ಳಿ ತಾಲೂಕಿನ ಚಬ್ಬಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶಾಸಕರಾದ ಎನ್.ಎಚ್.ಕೋನರಡ್ಡಿ ಅವರು ಗಣಪತಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಣೆಗೊಂಡಿರುವ ಶ್ರೀ ಗಣಪತಿ ದೇವರ ದರ್ಶನ ಪಡೆದು ನವಲಗುಂದ ವಿಧಾನಸಭಾ ಮತಕ್ಷೇತ್ರ-69 ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಿ ಪಿ ಐ ಮುರಘೇಶ ಚಣ್ಣನ್ನವರ, ಖ್ಯಾತ ನಿರೂಪಕರಾದ ಅಜಿತ ಹನುಮಕ್ಕನವರ, ಎ ಡಿ ಕುಲಕರ್ಣಿ, ಬಸವರಾಜ ಬೀರಣ್ಣವರ, ಪ್ರಭು ಪಾಟೀಲ, ಮುತ್ತು ಕಾಲವಾಡ ಸೇರಿದಂತೆ ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು.