Download Now Banner

This browser does not support the video element.

ಕಲಬುರಗಿ: ಗಾಣಗಾಪುರ ಸೇತುವೆ ಜಲಾವೃತ, ಸಂಚಾರ ಸಂಪೂರ್ಣ ಸ್ಥಗಿತ

Kalaburagi, Kalaburagi | Aug 24, 2025
ಮಹಾರಾಷ್ಟ್ರದ ಜಲಾಶಯಗಳಿಂದ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆಯಾದ ಪರಿಣಾಮ ದೇವಲಗಾಣಗಾಪುರ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಸೇತುವೆ ಮೇಲೆ ನಾಲ್ಕೈದು ಅಡಿ ಎತ್ತರಕ್ಕೆ ನೀರು ಹರಿಯುತ್ತಿದ್ದು, ಗಾಣಗಾಪುರ-ಜೇವರ್ಗಿ ಮಾರ್ಗದಲ್ಲಿ ನಾಲ್ಕು ದಿನಗಳಿಂದ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪ್ರತೀ ಮಳೆಗಾಲದಲ್ಲಿ ಈ ಸೇತುವೆ ಜಲಾವೃತವಾಗಿ ಗ್ರಾಮಸ್ಥರು ಹಾಗೂ ಸುಕ್ಷೇತ್ರ ಗಾಣಗಾಪುರಕ್ಕೆ ಬರುವ ಭಕ್ತರಿಗೆ ತೊಂದರೆ ಉಂಟಾಗುತ್ತಿದೆ. ಜನರಿಗೆ ಆಗುತ್ತಿರುವ ಸಂಚಾರದ ತೊಂದರೆಯನ್ನು ಮನಗಂಡು ಸೇತುವೆಯನ್ನು ಎತ್ತರಿಸಬೇಕೆಂದು ಸರ್ಕಾರಕ್ಕೆ ಸ್ಥಳೀಯರ ಪರವಾಗಿ ಗ್ರಾಮದ ಮುಖಂಡ ಮೈಬೂಬ್ ಮುಜಾವರ್ ಆಗ್ರಹಿಸಿದ್ದಾರೆ.
Read More News
T & CPrivacy PolicyContact Us