ಅರಣ್ಯ ಹುತಾತ್ಮರ ದಿನದಂದೇ ಅರಣ್ಯ ವೀಕ್ಷಕನೊಬ್ಬ ಕಾಡಾನೆ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದೆ. ಎಚ್.ಡಿ. ಕೋಟೆ ತಾಲೂಕಿನ ಮಾಣಿಮೂಲೆ ಹಾಡಿ ನಿವಾಸಿ ಅರಣ್ಯ ವೀಕ್ಷಕ ಟಿ. ರಾಜು (44) ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಡಿ.ಬಿ. ಕುಪ್ಪೆ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಕುದುರೆ ಸತ್ತಳ್ಳ ಹಾಗೂ ಬಸಪ್ಪನ ಸರ್ಕಲ್ ಬಳಿ ಗಸ್ತಿನಲ್ಲಿರುವಾಗ ಟಿ. ರಾಜು ಮೇಲೆ ಕಾಡಾನೆ ಏಕಾಏಕಿ ದಾಳಿ ಮಾಡಿದ್ದು, ರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟಿ. ರಾಜು ಕಳೇಬರವನ್ನು ಎಚ್.ಡಿ. ಕೋಟೆ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಸ್ಥಳಕ್ಕೆ ಎಚ್.ಡಿ. ಕೋಟೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.