ಹುಬ್ಬಳ್ಳಿ: ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಇಕೋ ಭಕ್ತಿ ಸಂಭ್ರಮ ಎಂಬ ವಿನೂತನ ಪರಿಕಲ್ಪನೆಯ ಮೂಲಕ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಮುಂದಾಗಿದೆ ಎಂದು ಹುಧಾ ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ ಘಾಳಿ ತಿಳಿಸಿದರು.ಪಿಒಪಿ ಮೂರ್ತಿಗಳಿಗೆ ಸಂಪೂರ್ಣ ಕಡಿವಾಣ ಹಾಕುವ ಪ್ರಯತ್ನ ನಮ್ಮದಾಗಿದೆ. ಕೆರೆ, ಬಾವಿ, ಪಿಒಪಿ ಗಣೇಶ ಮೂರ್ತಿಗಳನ್ನು, ಪ್ಲಾಸ್ಟಿಕ್, ಮರು ಬಳಕೆಯಾಗದ ತ್ಯಾಜ್ಯಗಳನ್ನು ವಿಸರ್ಜನೆ ಮಾಡದೆ, ಮನೆ ಆವರಣದಲ್ಲೇ ಬಕೆಟ್, ಕೃತಕ ಹೊಂಡಗಳಲ್ಲಿ ವಿಸರ್ಜಿಸಿ ಜಲ ಮೂಲಗಳನ್ನು ರಕ್ಷಿಸುವಂತೆ ಜನರಲ್ಲಿ ಅರಿವು ಮೂಡಿಸುವುದು ಅಭಿಯಾನದ ಉದ್ದೇಶ ಎಂದರು.