ಸೋಮವಾರಪೇಟೆ. ಇಲ್ಲಿ ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ ಎಂದು, ಸಿ ಮತ್ತು ಡಿ ವರ್ಗದ ಜಮೀನು ಎಂದು ಪರಿಗಣಿಸಿ, ಇದನ್ನು ಅರಣ್ಯ ಇಲಾಖೆಗೆ ಹತ್ತಾಲ್ತರಿಸುವ ನಿಟ್ಟಿನಲ್ಲಿ ಇಂದು ಶಾಂತಳ್ಳಿ ಹೋಬಳಿಯ ಇನಕನಹಳ್ಳಿಯ ಸ ನಂ 2/2 ರಲ್ಲಿ ಸರ್ವೆ ಕಾರ್ಯವನ್ನು ಮುಂದುವರಿಸಲಾಗಿತ್ತು. ಈ ಹಿಂದೆ ಅರಣ್ಯ ಇಲಾಖೆಯವರು ಸಿ ಮತ್ತು ಡಿ ಭೂಮಿ ಕಂಡುಬಂದ ಜಮೀನನ್ನು ಅರಣ್ಯ ಇಲಾಖೆಯ ಸ್ವತ್ತು ಎಂದು ಅ ಭಾಗದ ಜನರಿಗೆ ತಿಳಿಸದೆ ಸರ್ವೆ ಮಾಡುತ್ತಿದ್ದರು, ಇದನ್ನು ಖಂಡಿಸಿ ತಾಲೊಕು ರೈತ ಸಂಘಟನೆಗಳು ಪ್ರತಿಭಟನೆ ಮಾಡಿದ್ದು, ಇದಕ್ಕೆ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸೇರಿ ಜಂಟಿ ಸರ್ವೆ ಮಾಡುವಂತೆ ಆದೇಶಿಸಲಾಗಿತ್ತು. ಆದೇಶದ ಪಾಲನೆಯಂತೆ ತಹಸೀಲ್ದಾರ್ ನಿಗದಿಪಡಿಸಿದ ದಿನಾಂಕದಂದು ಇಂದು ಎರಡು ಇಲಾಖೆ ಸೇ