ಹುಬ್ಬಳ್ಳಿ: ನಗರದ ಲಕ್ಷ್ಮೀಕಾಂತ ಜಾಧವ ಎಂಬುವರ ಮೊಬೈಲ್‌ನಂಬರ್‌ಅನ್ನು ಅಪರಿಚಿತ ವ್ಯಕ್ತಿ ವಾಟ್ಸ ಆಪ್ ಗ್ರೂಪ್‌ಗೆ ಸೇರಿಸಿ ೬ ಲಕ್ಷ ರೂ. ವಂಚಿಸಿದ್ದಾರೆ. ಅಪರಿಚಿತರು ಲಕ್ಷ್ಮೀಕಾಂತ ಅವರ ನಂಬರ್‌ಗೆ ಲಿಂಕ್ ಕಳುಹಿಸಿ ಗ್ರೂಪ್‌ಗೆ ಸೇರಿಸಿದ್ದಾರೆ. ಬಳಿಕ ಪ್ಯಾನ್ ಕಾರ್ಡ್ ಹಾಗೂ ಇನ್ನಿತರ ಮಾಹಿತಿ ಪಡೆದು ಆಪ್‌ವೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ನಂಬಿಸಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.