ಸಾಗರ ವಿಭಾಗ ವ್ಯಾಪ್ತಿಗೆ ಬರುವ ಸಾಗರ ತಾಲ್ಲೂಕು ಆನಂದಪುರಂ ಹೋಬಳಿ ಮಲಂದೂರು ಗ್ರಾಮದ ಸ.ನಂ 157 ರಲ್ಲಿ ಮೀಸಲು ಅರಣ್ಯ ದಲ್ಲಿ ಒತ್ತುವರಿ ಮಾಡಿದ್ದ 6.24 ಎಕರೆ ಜಾಗವನ್ನು ಡಿಸಿಎಫ್ ಮೋಹನ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಭಾನುವಾರ ಸಂಜೆ 5 ಗಂಟೆಗೆ ತೆರವು ಮಾಡಲಾಗಿದೆ. ಆರ್.ಎಂ ಷಣ್ಮುಖ ಎಂಬುವವರು ಮಲಂದೂರು ಮೀಸಲು ಅರಣ್ಯ ಪ್ರದೇಶದಲ್ಲಿ 6-24 ಎಕರೆ ಪ್ರದೇಶವನ್ನು ಅನಧಿಕೃತವಾಗಿ ಒತ್ತುವರಿ ಮಾಡಿರುತ್ತಾರೆ. ಇದಲ್ಲದೇ ಸದರಿಯವರು ಶರಾವತಿ ಮುಳುಗಡೆ ಸಂತ್ರಸ್ಥರ ಯೋಜನೆಯಡಿ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಇವರು ಜಮೀನುಗಳನ್ನು ಮಂಜೂರಾತಿ ಪಡೆದಿದ್ದಾರೆ. ಇದರೊಂದಿಗೆ ಹಿಡುವಳಿ ಜಮೀನುಗಳನ್ನು ಹೊಂದಿರುವಂತೆ ದೊಡ್ಡ ಹಿಡುವಳಿದಾರರಾಗಿರುತ್ತಾರೆ.