ಮುಂಡಗೋಡ: ಅಜ್ಜಿ ಮನೆಗೆ ಹೋಗುತ್ತೇನೆಂದು ಹೇಳಿ ಹೋದ ಯುವತಿ ಮರಳಿ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಅರಶೀಣಗೇರಿ ಗ್ರಾಮದ ಸಾವಕ್ಕ ಸುರೇಶ ತೆಗ್ಗಳ್ಳಿ (19) ಕಾಣೆಯಾದ ಯುವತಿ.ಈ ಕುರಿತು ಆಕೆಯ ತಾಯಿ ಶಾರವ್ವ ತೆಗ್ಗಳ್ಳಿ ಮಗಳನ್ನು ಹುಡುಕಿಕೊಡುವಂತೆ ದೂರು ನೀಡಿದ್ದಾರೆ.