ಸೆಪ್ಟೆಂಬರ್ 13ರಂದು ದೇಶವ್ಯಾಪಿ ನಡೆಯುವ ರಾಷ್ಟ್ರೀಯ ಲೋಕ ಅದಾಲತ್ 2025ರ ಮೂರನೇ ಅದಾಲತ್ ಆಗಿದ್ದು, ತುಮಕೂರಿನ ಸುಮಾರು 50 ಕೋರ್ಟ್‌ಗಳಲ್ಲಿ ಏಕಕಾಲದಲ್ಲಿ ನಡೆಯಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ 3 ಗಂಟೆಯಲ್ಲಿ ಕೊರಟಗೆರೆ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು, “ಲೋಕ ಅದಾಲತ್ ಮೂಲಕ ವ್ಯಾಜ್ಯ ಪೂರ್ವ ಹಾಗೂ ಬಾಕಿ ಪ್ರಕರಣಗಳನ್ನು ಸಂಧಾನದ ಮೂಲಕ ಬೇಗನೆ ಇತ್ಯರ್ಥ ಮಾಡಬಹುದು. ಇದು ನ್ಯಾಯಾಲಯದ ಮೇಲಿನ ಹೊರೆ ಕಡಿಮೆ ಮಾಡುತ್ತದೆ ಹಾಗೂ ಜನರಲ್ಲಿ ನ್ಯಾಯಾಂಗದ ಬಗ್ಗೆ ಉತ್ತಮ ಮನೋಭಾವನೆ ಮೂಡಿಸುತ್ತದೆ” ಎಂದು ಹೇಳಿದರು.