ಹಿಂದೂ ಮಹಾಸಭೆಯ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಮಾಜಿ ಸಚಿವ ಶ್ರೀರಾಮುಲು ಹಾಗೂ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಬಳ್ಳಾರಿಯ ಸೆಂಟ್ರನರಿ ಹಾಲ್ ನಲ್ಲಿ ಪ್ರತಿಷ್ಠಾಪನೆ ಮಾಡಿದ ಹಿಂದೂ ಮಹಾಸಭೆಯ ಗಣಪತಿಯನ್ನು ಕಳೆದ ಏಳು ದಿನಗಳಿಂದ ಶ್ರದ್ಧಾ ಭಕ್ತಿಯಿಂದ ಪೂಜೆ ಪುರಸ್ಕಾರ ಮಾಡಲಾಯಿತು. ಮಂಗಳವಾರ ಸಂಜೆ 7ಗಂಟೆಗೆ ಬಳ್ಳಾರಿ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ವಿಸರ್ಜನೆಗೆ ಕರೆದುಕೊಂಡು ಹೋಗುವ ವೇಳೆ ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಶಾಸಕ ಭರತ್ ರೆಡ್ಡಿ ಭಾಗವಹಿಸಿದ್ರು. ಈ ವೇಳೆ ಅಭಿಮಾನಿಗಳ ಒತ್ತಾಸೆಗೆ ಶ್ರೀರಾಮುಲು ಡಿಜೆ ಸದ್ದಿಗೆ ಭರ್ಜರಿ ಹೆಜ್ಜೆ ಹಾಕಿದ್ದಾರೆ.