ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಲಿಂಗಾಪುರದ ಬಳಿ ಮುಖ್ಯ ರಸ್ತೆ ಮೇಲೆ ಸಿಲ್ವರ್ ಮರ ಬಿದ್ದ ಪರಿಣಾಮ ಕೆಲ ಕಾಲ ಅರೇಹಳ್ಳಿ-ಬಿಕ್ಕೋಡು ಮುಖ್ಯರಸ್ತೆಯ ಸಂಚಾರದಲ್ಲಿ ವ್ಯತ್ಯಯವುಂಟಾಯಿತು. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಯಿತು. ಮರ ಬಿದ್ದ ರಭಸಕ್ಕೆ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದದ್ದರಿಂದ ಲಿಂಗಾಪುರ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿತು. ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ಮರ ತೆರವುಗೊಳಿಸಲು ಸಹಕಾರ ನೀಡಿದರು. ಸೆಸ್ಕ್ ಸಿಬ್ಬಂದಿಗಳು ಮುರಿದು ಬಿದ್ದ ಕಂಬವನ್ನು ತೆರವುಗೊಳಿಸಿ ಬದಲಿ ಕಂಬವನ್ನು ಹಾಕಿ ಲಿಂಗಾಪುರ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಶ್ರಮಿಸಿದರು.