ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗದ ಜಾಲಕ್ಕೆ ನಲುಗಿ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಭದ್ರಾವತಿಯ ಯುವ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೇ ನಡೆಯಿತು. ಈ ಪ್ರತಿಭಟನೆಯಲ್ಲಿ ಯುವ ಮೋರ್ಚಾದ ಅಧ್ಯಕ್ಷರಾದ ಧನುಷ್ ಬೋಸ್ಲೆ, ಉಪಾಧ್ಯಕ್ಷ ಧನ್ಯ ಪಟೇಲ್, ಯುವ ಮೋರ್ಚಾದ ಪ್ರಮುಖರಾದ ಸುಧಾಕರ್, ಭರತ್, ತ್ಯಾಗರಾಜ್, ಮನು, ಶಶಾಂಕ್, ನವೀನ್, ರೈತ ಮೋರ್ಚಾ ಅಧ್ಯಕ್ಷರಾದ ಆನಂದ್, ಓಬಿಸಿ ಮೋರ್ಚಾ ಅಧ್ಯಕ್ಷರಾದ ರಾಜಶೇಖರ್, ಪ್ರಮುಖರಾದ ಸುಬ್ರಮಣಿ, ಶಾಂತಣ್ಣ, ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಾಜೇಶ್, ಹಾಗೂ ಯುವ ಮೋರ್ಚಾದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.