ನಗರದಲ್ಲಿನ ರಸ್ತೆ ಗುಂಡಿಗಳನ್ನ ತೆರವುಗೊಳಿಸಲು ಸೂಚಿಸಿ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಸಿ.ಎಂ ಶಿವಕುಮಾರ್ ನಾಯಕ್ ಅವರು ವಿನೂತನ ಪ್ರತಿಭಟನೆ ನಡೆಸಿದರು.ಆಗಸ್ಟ್ 22ರಂದು ಬೆಳಿಗ್ಗೆ 11 ಗಂಟೆಗೆ ಕೆಂಗೇರಿ ಬಳಿ ಹೊರ ವಲಯದ ರಸ್ತೆಯಲ್ಲಿ ಗುಂಡಿಗಳೆದುರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಭಾವಚಿತ್ರ ಹಿಡಿದು ಕುಳಿತ ಅವರು ತುಪ್ಪದ ದೀಪ ಬೆಳಗಿ, ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟಿಸಿದರು.ನಿತ್ಯ ಅವಾಂತರಗಳಿಗೆ ಕಾರಣವಾಗುತ್ತಿದ್ದರು ಕಣ್ಮುಚ್ಚಿ ಕುಳಿತಿರುವ ಪಾಲಿಕೆ, ಸರ್ಕಾರ ತಕ್ಷಣವೇ ಗುಂಡಿಗಳನ್ನ ತೆರವುಗೊಳಿಸುವಂತೆ ಅವರು ಆಗ್ರಹಿಸಿದರು.