ಸಕಲೇಶಪುರ:- ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮಪಂಚಾಯಿತಿಯ ಮರ್ಕಹಳ್ಳಿ ಗ್ರಾಮದಲ್ಲಿ 12 ಅಡಿ ಉದ್ದವಾದ ಕಾಳಿಂಗ ಸರ್ಪ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ, ಕಾಫಿ ತೋಟಕ್ಕೆ ಹೋಗುವ ಕೂಲಿ ಕಾರ್ಮಿಕರಿಗೆ ಹೆದರಿಕೆ ಹಾಗೂ ಆತಂಕ ಉಂಟು ಮಾಡಿತ್ತು. ಇಂದು ಉರಗತಜ್ಞರಾದ ಚoಗಡಿಹಳ್ಳಿ ರವಿ ರವರ ಸಹಾಯದಿಂದ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಬಿಸ್ಲೆ ರಕ್ಷಿತ ಅರಣ್ಯಕ್ಕೆ ಬಿಡಲಾಯಿತು. ಮರ್ಕಹಳ್ಳಿ ಗ್ರಾಮದ ಶಂಕರೆ ಗೌಡ ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಕಾಣಿಸಿಕೊಂಡ ಈ ಕಾಳಿಂಗ ಸರ್ಪವನ್ನು ನೋಡಿ ಗ್ರಾಮಸ್ಥರು ಗಾಬರಿಗೊಂಡು ತಕ್ಷಣ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ.ಮಾಹಿತಿ ಪಡೆದ ಯಸಳೂರು ವಲಯ ಅರಣ್ಯ ಅಧಿಕಾರಿಗಳು ಚಂಗಡಿಹಳ್ಳಿ ಗ್ರಾಮದಉರಗ ಪ್ರೇಮಿ ರವಿ ಮೂಲಕ ರಕ್ಷಣೆ ಮಾಡಲಾತ