ಆಗಸ್ಟ್ 29 ಬೆಳಿಗ್ಗೆ 11 ಗಂಟೆ ಸುಮಾರಿಗೆ ಪ್ರಯಾಣಿಕನಿಗೆ ಬಿಎಂಟಿಸಿ ನಿರ್ವಾಹಕ ಕಪಾಳ ಮೋಕ್ಷ ಮಾಡಿರುವ ಘಟನೆ ನಡೆದಿದೆ. ಟಿಕೆಟ್ ಪಡೆದಿಲ್ಲ ಅಂತ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದು ವ್ಯಾಪಕ ಚರ್ಚೆಗೆ ಗ್ರಾಸ ಆಗಿದೆ. ದೇವನಹಳ್ಳಿ ಇಂದ ಮೆಜೆಸ್ಟಿಕ್ ಕಡೆ ಬರ್ತಿದ್ದ ಬಸ್ ಅಲ್ಲಿ ನಡೆದ ಘಟನೆ ಇದಾಗಿದ್ದು, ಚೆಕ್ಕಿಂಗ್ ವೇಳೆ ಟಿಕೆಟ್ ಪಡೆದಿಲ್ಲ ಅಂತ ಕಂಡಕ್ಟರ್ & ಪ್ರಯಾಣಿಕನಿಗೆ ಫೈನ್ ಹಾಕಲಾಗಿತ್ತು.. ಇದೇ ಕಾರಣಕ್ಕೆ ಸಿಟ್ಟಿಗೆದ್ದ ಕಂಡಕ್ಟರ್ ಕಪಾಳ ಮೋಕ್ಷ ಮಾಡಿದ್ದಾರೆ.