ಕಿರವತ್ತಿ: ಕಿರವತ್ತಿ ಪಬ್ಲಿಕ್ ಶಾಲೆಯ ಆಶ್ರಯದಲ್ಲಿ ಕಿರವತ್ತಿ ವಲಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಮಾತನಾಡಿ ಕ್ರೀಡಾಮನೋಭಾವದಿಂದ ಆಡುವುದು ಮುಖ್ಯ. ನಿರ್ಣಾಯಕರ ನಿರ್ಣಯಕ್ಕೆ ಬದ್ಧರಾಗಿ ನಡೆಯಬೇಕೆಂದು ಹೇಳಿದರು. ವೇದಿಕೆಯಲ್ಲಿ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷ ನಾರಾಯಣ ಜಗದಾಳಿ ,ಪ್ರಾಂಶುಪಾಲ ಸುಭಾಸ ನಾಯಕ, ಮುಖ್ಯಾಧ್ಯಾಪಕ ಜನಾರ್ಧನ ಗಾಂವ್ಕರ , ಇಸಿಒ ಪ್ರಶಾಂತ ಜಿ.ಎನ್. , ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ, ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಜಯ ನಾಯಕ, ಚಿತ್ರ ಕಲಾವಿದ ಸತೀಶ ಯಲ್ಲಾಪುರ ಮುಂತಾದವರಿದ್ದರು.