ಮಳೆ ಬಾರದ ಮುಗಿಲು ನೋಡುತ್ತಿರುವ ರೈತ ಮಳೆ ಬರಲಿ ಬರದೇ ಇರಲಿ ಇಲ್ಲೊಂದು ಮನೆಗೆ ಜಲಬಾದೆಯಿಂದ ಕುಟುಂಬ ಹೈರಾಣಿಗಿರುವುದು ತಾಲ್ಲೂಕಿನಲ್ಲಿ ಶನಿವಾರ ಬೆಳಕಿಗೆ ಬಂದಿದೆ.ತಾಲೂಕಿನ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೌರಸಮುದ್ರ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಂಡೆತಿಮ್ಲಾಪುರ ಗ್ರಾಮದ ಗೋವಿಂದಪ್ಪ ಇವರ ಮನೆಯ ಬುನಾದಿಯಿಂದ ನೀರು ಮನೆಒಳಗೆ ಬರುತ್ತಿದೆ. ಇದು ಇಂದು, ನಿನ್ನೆಯದಲ್ಲ ಸುಮಾರು 2016 ನೇ ಸಾಲಿನಿಂದಲೂ ನೀರು ಬರುತ್ತಿದ್ದು ದಿನ ನಿತ್ಯನೀರು ಹೊರ ಹಾಕಿ ಜೀವನ ಸಾಗಿಸುವಂತಾಗಿದೆ.