ತುಮಕೂರು ಜಿಲ್ಲೆಯ ಸುಂಕಾಪುರದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಯಲ್ಲಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಪರಿಶೀಲನೆ ನಡೆಸಿದ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ , ಈ ಯೋಜನೆ ಯಾರಿಗೂ ಅನ್ಯಾಯವಾಗದಂತೆ ಕಾನೂನು ಚೌಕಟ್ಟಿನಲ್ಲಿ ನಡೆಸಲಾಗುತ್ತದೆ. ರೈತರು ಗಾಬರಿಯಾಗಬಾರದು, ಎಲ್ಲ ಕ್ಷೇತ್ರಗಳ ಹಿತ ಕಾಯಲಾಗುವುದು” ಎಂದು ಭರವಸೆ ನೀಡಿದರು. ಅವರು, “ಕುಣಿಗಲ್ ಸೇರಿದಂತೆ ಎಲ್ಲಾ ತಾಲೂಕುಗಳಿಗೆ ಸಮಾನ ಹಂಚಿಕೆ, ಹೆಚ್ಚುವರಿ ನೀರು ಬಂದರೆ ಮಾತ್ರ ಹರಿವು. ಸ್ಕಾಡಾ ವ್ಯವಸ್ಥೆ ಅಳವಡಿಸಿ ಪಾರದರ್ಶಕ ಹಂಚಿಕೆ ಮಾಡಲಾಗುತ್ತದೆ. ಭೂಸ್ವಾಧೀನಕ್ಕೆ ಕಾನೂನುಬದ್ಧ ಪರಿಹಾರ ನೀಡಲಾಗುವುದು. ನಮ್ಮೊಳಗೆ ಜಗಳವಾಡದೆ ಒಟ್ಟಾಗಿ ಕೆಲಸ ಮಾಡೋಣ” ಎಂದು ಮನವಿ ಮಾಡಿದರು.