ಮದ್ಯದ ಅಮಲಿಲ್ಲಿ ಡಿಲೆವರಿ ಬಾಯ್ ಮೇಲೆ ಮಚ್ಚು ಬೀಸಿದ್ದ ಆರೋಪಿಯನ್ನ ವಿ.ವಿ.ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕಳೆದ ವಾರ ಮಿನರ್ವ ಸರ್ಕಲ್ ಬಳಿ ತನ್ವೀರ್ ಖಾನ್ ಎಂಬಾತನ ಮೇಲೆ ಮಾರಕಾಸ್ತ್ರ ಬೀಸಿದ್ದ ಚಂದನ್ ಎಂಬಾತನನ್ನ ಬಂಧಿಸಲಾಗಿದೆ. ಪ್ರಕರಣದ ಕುರಿತು ಸೆಪ್ಟೆಂಬರ್ 30ರಂದು ಮಧ್ಯಾಹ್ನ 1 ಗಂಟೆಗೆ ಮಾಹಿತಿ ನೀಡಿದ ಪೊಲೀಸರು, 'ಬೆಳಗ್ಗಿನ ಜಾವ 1:30ರ ಸುಮಾರಿಗೆ ಬೈಕ್‌ನಲ್ಲಿ ಬಂದಿದ್ದ ಆರೋಪಿ ಚಂದನ್ ಹಾಗೂ ಮತ್ತೋರ್ವ, ಗೋದಾಮಿನ ಬಳಿ ನಿಂತಿದ್ದ ತನ್ವೀರ್ ಖಾನ್ ಮೇಲೆ ಹಲ್ಲೆಗೈದು ಪರಾರಿಯಾಗಿದ್ದರು.ಚಂದನ್ ಜೊತೆಗಿದ್ದ ಮತ್ತೋರ್ವ ಅಪ್ರಾಪ್ತನಾಗಿದ್ದು ಆತನ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ತಿಳಿಸಿದರು.