ಶ್ರೀಮತಿ ಮತ್ತು ಶ್ರೀ ವೈ.ಇ. ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಪ್ರಹ್ಲಾದ್ ಬಿ.ಪಿ. ಅವರು ದೀರ್ಘಕಾಲದ ಸರ್ಕಾರಿ ಸೇವೆ ನಂತರ ಶನಿವಾರ ವಯೋನಿವೃತ್ತಿ ಹೊಂದಿದರು. ಈ ಹಿನ್ನೆಲೆಯಲ್ಲಿ ಕಾಲೇಜು ಹಾಗೂ ಅಪಾರ ಸ್ನೇಹ ಬಳಗದಿಂದ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಬಿ.ಎನ್. ಮುರಳಿಧರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ಪ್ರಾಂಶುಪಾಲ ಡಾ. ಎನ್. ಶ್ರೀಧರ್, ನಿವೃತ್ತ ಜಂಟಿ ನಿರ್ದೇಶಕ ಡಾ. ರೇಣುಕಾರಾಧ್ಯ, ನಿವೃತ್ತ ಪ್ರಾಧ್ಯಾಪಕ ಈ. ಸಿದ್ದಪ್ಪ, ನಿವೃತ್ತ ಪ್ರಾಂಶುಪಾಲ ಡಾ. ಮುನೀಂದ್ರ ಸೇರಿದಂತೆ ಗಣ್ಯರು ಭಾಗವಹಿಸಿ, ಪ್ರಹ್ಲಾದ್ ಅವರ ಸೇವಾ ಪಥ ಮತ್ತು ನಿಸ್ವಾರ್ಥ ತ್ಯಾಗವನ್ನು ನೆನಪಿಸಿ