ತಾಲೂಕಿನ ಅಂಬಲಾರೆ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಜಮೀನು ವಿವಾದ ಸಂಬಂಧ ಮಾರಾಮಾರಿ ನಡೆದು ಹಲವರು ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳು ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಂಬಲಾರೆ ಗ್ರಾಮದ ರೈತ ಹೊನ್ನೇಗೌಡ ಎಂಬುವರಿಗೆ ಸುಮಾರು 20 ವರ್ಷಗಳ ಹಿಂದೆ ಸರ್ಕಾರದಿಂದ ಎರಡು ಎಕರೆ ಜಮೀನು ಮಂಜೂರಾಗಿತ್ತು. ನ್ಯಾಯಾಲಯ ಕೂಡ ಇವರ ಪರ ಆದೇಶ ಮಾಡಿತ್ತು..