ಸಿಲಿಕಾನ್ ಸಿಟಿಯ ಹೊರವಲಯ ಆನೇಕಲ್ ನಲ್ಲಿ ಪತ್ನಿ ಪ್ರಶಂಸಾ ದಿನವನ್ನು ಆಚರಣೆ ಮಾಡಲಾಯಿತು. ಬದುಕಿ ಮುದ್ದಕ್ಕೂ ಕೂಡ ಖುಷಿಯಲ್ಲಿ ಜೊತೆಯಾಗಿ ಕಷ್ಟದಲ್ಲೂ ಜೊತೆಯಾಗಿ ಪತಿಗೆ ಸಾಥ್ ಕೊಡುವ ಸತಿಗೆ ಹೊಗಳುವಂತಹ ದಿನ ಇದು. ಪತ್ನಿಗೆ ಧನ್ಯತಾ ಭಾವ ಪತಿ ಸಮರ್ಪಣೆ ಮಾಡುವಂತಹ ದಿನ. ಆಗಸ್ಟ್ 31ರ ಬೆಳಗ್ಗೆ ಸುಮಾರು 12 ಗಂಟೆಯ ಹೊತ್ತಿಗೆ ಪತ್ನಿ ಪ್ರಶಂಸ ದಿನಾಚರಣೆ ಮಾಡಲಾಯಿತು. ನೂರಾರು ದಂಪತಿಗಳು ಈ ಒಂದು ಸಂಭ್ರಮದಲ್ಲಿ ಭಾಗಿಯಾಗಿದ್ದರು